ಶ್ರೀ ಕೃಷ್ಣನ ಸಂಸಾರ

ಸಕಲರನು ಸಂಸಾರ ಬಂಧಕ್ಕೆ ಸಿಲುಕಿಸುವವ ಶ್ರೀಕೃಷ್ಣ ಭವಸಂಸಾರ ದಾಟಿಸುವವನೂ ಅವನೇ.  ೧೬೧೦೮ ಕನ್ಯೆಯರನ್ನು ಮದುವೆ ಮಾಡಿಕೊಂಡು ದೊಡ್ಡ ಸಂಸಾರ ಹೂಡಿಕೊಂಡವನೂ ಆತನೇ.  ಈಸ ಬೇಕು, ಇದ್ದು ಜಯಿಸಿ ಬೇಕು ಎಂದವನು ಕೃಷ್ಣ ಅಲೌಲಿಕ ಸಂಸಾರ ಆತನದು. ಆದರೂ ಲೋಕಕ್ಕೆಲ್ಲ  ಮಾದರಿ.  ರುಕ್ಮಿಣಿ, ಸತ್ಯಭಾಮೆಯರು – ಶ್ರೀ, ಭೂ ರೂಪದ ಲಕ್ಷ್ಮೀ. ನಿತ್ಯ ಅವಿಯೋಗಿನಿಯರು. ಕಾಳಿಂದಿ, ಮಿತ್ರವ್ರಂದಾ, ನೀಲಾ,ಭದ್ರಾ, ಜಾಂಬವತಿ, ಲಕ್ಷಣಾ – ಸ್ವಯಂವರದಲ್ಲಿ ಗೆದ್ದು ಮದುವೆ ಮಾಡಿ ಕೊಂಡ. ಷಣ್ಮಹಿಷಿಯರು. ಒಟ್ಟು ಅಷ್ಟ ಮಹಿಷಿಯರು. ಅಲ್ಲದೇ ೧೬೧೦೦ ರಾಜ ಕನ್ಯೆಯರನ್ನು ನರಕಾಸುರನ ಸೆರೆ ಬಿಡಿಸಿ ಮದುವೆಯಾದ.ಎಲ್ಲರಲ್ಲೂ ಲಕ್ಷ್ಮೀ ದೇವಿಯ ಆವೇಶ.  ಶ್ರೀರಮಾ ದೇವಿ ಇಲ್ಲದ ಯಾವ ದೇವಿಯ ಸ್ಪರ್ಶವನ್ನೂ ಆತ ವಲ್ಲ. ಅಷ್ಟೇ ಅಲ್ಲ. ಶ್ರೀ ದೇವಿಯಲ್ಲೂ ತನ್ನ ಸ್ವಾಖ್ಯ ರೂಪವಿಟ್ಟು ಅವಳಿಗೆ ಆನಂದ ಕೊಡುವ ಸ್ವರಮಣ ನಾತ
.

ಹೀಗೆ ಆತ ಒಟ್ಟು ವರಿಸಿದ್ದು – ೮ +೧೬೧೦೦. +ಕುಬ್ಜಾ +ಅಸಂಖ್ಯ ಗೋಪಿಯರು.–ಲೆಕ್ಕ ಇಡುವದೇ ಕಷ್ಟ.  ಇಷ್ಟೊಂದು ಮಡದಿಯರು ಕೃಷ್ಣನಿಗೆ- ಎಂಬುದು ಜಗಜ್ಜಾಹೀರು. ಆದರೂ ಕೃಷ್ಣ ‘ತಾನು ನಿತ್ಯ ಬ್ರಹ್ಮಚಾರಿ.ಹೀಗಿದ್ದರೆ ಹೀಗಾಗಲಿ’ ಎಂದು ಎಲ್ಲಿ ಬೇಕಲ್ಲಿ, ಎಲ್ಲರೆದುರು ಪ್ರತಿಜ್ಞೆ ಮಾಡುತ್ತಿದ್ದ. ಹಾಗೇ ಆಗುತ್ತಿತ್ತು. ಸತ್ಯ ಸಂಕಲ್ಪನಲ್ಲವೇ ಆತ!  ಎಲ್ಲ ಪತ್ನಿಯರನ್ನೂ ಅತ್ಯಂತ ಪ್ರೀತಿಯಿಂದ ಕಾಣುವವ ಕೃಷ್ಣ ಏಕಕಾಲದಲ್ಲಿ ಎಲ್ಲರ ಅಂತಃಪುರದಲ್ಲಿ ಆತ ಯಾವಾಗಲೂ ಇರತ್ತಿದ್ದ. ಎಲ್ಲರಿಗೂ ಆತನ ಮೇಲೆ ವಿಚಿತ್ರ ಆಕರ್ಷಣೆ. ಎಲ್ಲರಗಿಂತ ಹೆಚ್ಚು, ತನ್ನನ್ನೇ ಪ್ರೀತಿಸುತ್ತಾನೆ ಕೃಷ್ಣ ಎಂಬುದು ಎಲ್ಲರ ಭಾವನೆ. ಮಾಯಾವಿಯಲ್ಲವೇ ಆತ!
ಲಾವಣ್ಯದಲಿ ಲೋಕಮೋಹಕ ನೀತ.. ಕೃಷ್ಣ. ಮೋಹಿನಿಯ ರನ್ನು ಮೋಹಪಾಶದಿಂದ ಬಂಧಿಸಿದ್ದ. ಅವರೇನೂ ಕಡಿಮೆಯವರಲ್ಲ. ಸೋಳಸಾಸಿರ ಪತ್ನಿಯ ರು ಕಾಮ ತುಂಬಿದ ಪ್ರೇಮಬಾಣಗಳನ್ನು ಕಾಮ ಜನಕ ನ ಮೇಲೆ ಪ್ರಯೋಗಿಸಿದರು.ಅದೆಲ್ಲ ವ್ಯರ್ಥವಾಯಿತು. ಸ್ವರಮಣನಾತ. ರಮಣಿಯರಿಗೆ ಮಣಿಯುವದುಂಟೇ?

ನಿರ್ವಿಕಾರನಾಗಿದ್ದ. ಆದರೆ ಭಕ್ತ ಪರಾಧೀನ. ಅವರ ಪ್ರೇಮಪೂರ್ವಕ ಭಕ್ತಿಗೆ ವಶನಾದ.ಅವರೆಲ್ಲ ಅವನಿಗೆ ಸ್ನಾನ ಮಾಡಿಸಿ, ವಸ್ತ್ರ ತೊಡಿಸಿ, ಅಲಂಕರಿಸಿ, ಆದರಿಸಿ ಅನನ್ಯವಾಗಿ ಕೃಷ್ಣನ ಸೇವೆ ಮಾಡಿದರು. ಕೋಟಿಕೋಟಿ ಭ್ರತ್ಯರಿರಲು, ಹಾಟಕಾಂಬರನ ಸೇವೆ ಸಾಟಿಇಲ್ಲದೆ ಮಾಡಿದರು. ವಿಚಿತ್ರ ಚರಿತ ಕೃಷ್ಣನ ಪೂರ್ಣನೋಟವ ಪಡೆದು ಸುಖಿಸುತ್ತಿದ್ದರು. ಏನು ಧನ್ಯರೋ! ಎಂಥ ಮಾನ್ಯರೋ ೧೬೧೦೮ ಪತ್ನಿಯರು. ಪ್ರತಿಯೊಬ್ಬರಲ್ಲಿ ೧೦ಗಂಡು+೧ಹೆಣ್ಣು ಸಂತಾನ ಪಡೆದ ಕೃಷ್ಣ. ಜಗತ್ತನ್ನು ಬೆರಗುಗೊಳಿಸಿತು ಕೃಷ್ಣನ ತಪ್ಪದ ಲೆಕ್ಕ! ಸರ್ವಸಮರ್ಥನಲ್ಲವೇ ಆತ!.

ಒಟ್ಟು ಪುತ್ರರು -೧೬೧೦೮೦. ಪುತ್ರಿಯರು -೧೬೧೦೮. ಎಂಬುದೊಂದು ಲೆಕ್ಕ. ಈ ಪುತ್ರ ಪುತ್ರಿಯರಿಗೆ ಪುತ್ರ ಪುತ್ರಿಯರು.ಕೃಷ್ಣನ ಮೊಮ್ಮಕ್ಕಳು. ಹೀಗೆ ಕೃಷ್ಣನ ಸಂಸಾರದ ಸದಸ್ಯರೇ ಕೋಟಿ ಮಿಕ್ಕಿದ್ದರು. ದ್ವಾರಕೆಯಲ್ಲಿ ಕೃಷ್ಣನ ಬಳಗಕ್ಕಾಗಿಯೇ ಪ್ರತ್ಯೇಕ ಸಾವಿರ ಸಾವಿರ ಅರಮನೆಗಳ ರಾಜಬಡಾವಣೆ – ಅದರ ಹೆಸರು ಕೃಷ್ಣ ಕಾಲೋನಿ. ಇಷ್ಟಲ್ಲದೇ ಕೃಷ್ಣನಿಗೆ ಕುಬ್ಜೆಯಲ್ಲಿ ‘ ವಿಶೋಕ’ ನೆಂಬ ಸುಪುತ್ರ. ಈತ ಮುಂದೆ ನಮ್ಮಮುಖ್ಯಪ್ರಾಣನಾದ ಭೀಮಸೇನ ದೇವರ ಸಾರಥಿಯಾಗುತ್ತಾನೆ. ಇದಲ್ಲದೆ ಗೋಪಿಯರಲ್ಲಿ ೧೦ ಲಕ್ಷ ಪುತ್ರರು.ಅತಿ ಬಲಶಾಲಿಗಳು. ‘ ನಾರಾಯಣೀ ಸೇನೆ’ ಎಂದೇ ಪ್ರಸಿದ್ಧ. ಮತ್ತೆ ಕೃಷ್ಣನ ಸಂಸಾರವೆಲ್ಲ ದೇವಾಂಶ ಸಂಭೂತರೇ. ಹೀಗೆ ಮುರಾರಿಯ ಸಂಸಾರವೇ ಅದ್ಭುತ! ವಸುಧೈವಕ ಕುಟುಂಬಿಯಲ್ಲವೇ ಆತ!  ನಿಮಗೆ ಸಂಸಾರ ದಾಟಬೇಕೇ?ಭವಸಂಸಾರ ಮೋಚಕನಾದ, ಕಂಸಾರಿ ಮರ್ದನನಾದ. ನಮ್ಮ ಪೊಡವಿಗೊಡೆಯ ಉಡುಪಿಯ ಶ್ರೀ ಕೃಷ್ಣನ ಸ್ಮರಿಸಿ.

*** ಶ್ರೀ ಕೃಷ್ಣಾರ್ಪಣಮಸ್ತು ***

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s